ಹೈಪರ್ ಲಿಂಕ್ ಕಥಾ ಶೈಲಿಯ ಕೇಸ್ ಆಫ್ ಕೊಂಡಾಣ.
Posted date: 02 Tue, Jan 2024 01:50:01 PM
ವಿಜಯ ರಾಘವೇಂದ್ರ ಅಭಿನಯದ 50ನೇ ಚಿತ್ರ ಸೀತಾರಾಮ್ ಬಿನೋಯ್ ಎಂಬ ಕ್ರೈಂ ಥ್ರಿಲ್ಲರ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಈದೀಗ ಮತ್ತೊಂದು ವಿಭಿನ್ನ ಕಥಾ ಹಂದರದ ಕೇಸ್ ಆಫ್ ಕೊಂಡಾಣ ಎಂಬ ಹೈಪರ್ ಲಿಂಕ್ ಇನ್ವೆಸ್ಟಿಗೇಷನ್ ಚಿತ್ರವನ್ನು ತೆರೆಗೆ ತರಲು ಸಿದ್ಧವಾಗಿದ್ದಾರೆ. 

ಚಿತ್ರವು ಸಂಪೂರ್ಣ ಬೆಂಗಳೂರಿನಲ್ಲಿ ನಡೆಯುವ ಕಥೆಯಾಗಿದ್ದು ಆರಂಭದಲ್ಲಿ ಮೂರು ಕಥೆಗಳು ಪ್ರಯಾಣ ಮುಂದುವರಿಸುತ್ತಾ ಕೊನೆಯಲ್ಲಿ ಹೇಗೆ ಎಲ್ಲವೂ ಒಂದು ಕಡೆ ಸೇರುತ್ತವೆ ಎನ್ನುವುದು ವಿಭಿನ್ನ. 

ಚಿತ್ರದ ಶೇಕಡಾ 80 ಭಾಗ ಒಂದು ರಾತ್ರಿಯಲ್ಲಿ ನಡೆಯುವ ಘಟನೆಯಾಗಿದೆ. ಬೆಂಗಳೂರಿನ ಕೊಂಡಾಣ ಎನ್ನುವ ಕಾಲ್ಪನಿಕ ಸ್ಥಳದಲ್ಲಿ  ಆ ರಾತ್ರಿ ನಡೆಯುವ ಘಟನೆ ಯಾದರೂ ಏನು ಎನ್ನುವ ಎಲ್ಲಾ ಪ್ರಶ್ನೆಗಳಿಗೂ ಜನವರಿ 26 ಉತ್ತರ ಸಿಗಲಿದೆ. ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ವಿಜಯ ರಾಘವೇಂದ್ರ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಎಮೋಷನ್,  ಕ್ರೈಂ, ಆಕ್ಷನ್, ಇರುವುದರ ಜೊತೆಗೆ ಪ್ರೇಕ್ಷಕರನ್ನು ಹಿಡಿದು ಕೂರಿಸುವ ಚಿತ್ರಕಥೆ ಇದೆ. 

ವಿಜಯ ರಾಘವೇಂದ್ರ, ಭಾವನಾ ಮೆನನ್, ಖುಷಿ ರವಿ, ರಂಗಾಯಣ ರಘು  ಸೇರಿದಂತೆ ಬಹು ದೊಡ್ಡ ತಾರಾಬಳಗವಿದೆ. ಸೀತಾ ರಾಮ್ ಬಿನೋಯ್ ಗೆ ಕೆಲಸ ಮಾಡಿದಂತ ಟೆಕ್ನಿಷಿಯನ್ ಇಲ್ಲಿಯೂ ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ, ವಿಶ್ವ ಜಿತ್ ರಾವ್ ಛಾಯಾಗ್ರಹಣ, ಭವಾನಿ ಶಂಕರ್ ಆನೆಕಲ್ಲು ಕಲಾ ನಿರ್ದೇಶನ ಹಾಗೂ ಶಶಾಂಕ್ ನಾರಾಯಣ್ ಸಂಕಲನವಿದೆ. ಪ್ರಮೋದ್ ಮರವಂತೆ, ವಿಶ್ವ ಜಿತ್ ರಾವ್ ಸಾಹಿತ್ಯ ವಿರುವ ಈ ಚಿತ್ರಕ್ಕೆ ಜೋಗಿ ಯವರು ಸಂಭಾಷಣೆ ಬರೆದಿದ್ದಾರೆ. ನಿರ್ದೇಶನದ ಜೊತೆಗೆ ದೇವಿಪ್ರಸಾದ್ ಶೆಟ್ಟಿ ಯವರು ಸಾತ್ವಿಕ್ ಹೆಬ್ಬಾರ್ ಜೊತೆ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed